Monday, February 22, 2010

ಮಧುಚಂದ್ರ

ಒಂದಿರುಳ ಕನಸಿನಲಿ
ನನ್ನವಳ ಜೊತೆಯಲ್ಲಿ,
ನಾ ಹಾರಾಡುತ್ತಿದ್ದೆ
ಬಾನಂಗಳದಲ್ಲಿ

ಮಧುಚಂದ್ರಕ್ಕಾಗಿ
ಕಾದು ನಿಂತ ದೋಣಿಯ
ಹಾಗೆ ಕಾಣುತ್ತಿದ್ದ ಚಂದಿರ
ತಾರಾಮಂಡಲದ
ಜೇನ ಕಡಲಿನಲಿ

ಅವಳು ನಾನು
ಚಂದಿರನೇರಿ ಹೊರಟಾಗ
ಖುಷಿಯನ್ನು ಹೆಚ್ಚಿಸುತ್ತಿತ್ತು
ತಾರೆಗಳ ಚಪ್ಪಾಳೆ

ಸಪ್ತಸಾಗರದಾಚೆ
ನಾವು ದಾಟಿ ಹೋದಂತೆ
ಭಾಸವಾಗುತಿದೆ
ನನ್ನ ಭಾವಲಹರಿಯಲಿ

ಕಣ್ತೆರೆದು ನೋಡಿದರೆ
ನಾ ನಮ್ಮನೆ ಮಂಚದಲ್ಲಿದ್ದೆ
ನಾ ಒಂಟಿಯಾಗಿ...!
ಆದರೂ ಚೆಂದ
ಕನಸಿನಲ್ಲೂ ಕಂಡ
ಮಧುಚಂದ್ರ . . . !
ವಾಹ್ ಬಲು
ಮೋಹಕ ... ಚುಂಬಕ ...

5 comments:

prakash said...

ವಾವ್ ಅದ್ಬುತ ಕಲ್ಪನೆ
ಆ ಕಲ್ಪನೆಗೆ ತಕ್ಕಂತ ಚಿತ್ರ

ಚಿತ್ರದಿಂದ ಕವನ ಸ್ಪೂರ್ತಿಯೊ
ಕವನ ಚಿತ್ರಕ್ಕೆ ಸ್ಪೂರ್ತಿಯೊ

ಬಹಳ ಚೆನ್ನಾಗಿದೆ ಗೆಲೆಯ

RAGHAVENDRA R said...

Thanks .. Prakash Sir

Harish said...

tumba chanagide kanasinalli preyasi jotheyalli chandralokakke hogibandidderi.

tumba olle kalpane Rag

tumba changide

ಸೀತಾರಾಮ. ಕೆ. said...

ಚೆ೦ದದ ಕವನ. ಕಲ್ಪನೆ ವಿನೂತನ. ಲಹರಿ ಮು೦ದುವರೆಯಲಿ.

RAGHAVENDRA R said...

thanks Harish..

and Seetharam sir..