
ಹೇಗೆ ಬಣ್ಣಿಸಲಿ... ಗೆಳತಿ
ನನ್ನೆದೆಯ ಪ್ರೀತಿ...!
ಹೇಗೆ ವರ್ಣಿಸಲಿ.. ನಾ
ನೀ ನಗುವ ರೀತಿ.
ಕಣ್ಣೆವೆಯ ಅಂಚಲಿ
ನೀನಿರುವಾಗ.. ಮುಚ್ಚಿದರೂ
ನಾ.. ರೆಪ್ಪೆಯನು..
ಕಾಣುವೆ, ಕಾಡುವೆ ಗೆಳತಿ ನೀ...
ಮನ ಮೋಹಗೊಳ್ಳುವುದು
ಕಂಡಾಗ
ನಿನ್ನ ತುಟಿಯಂಚಿನ ನಗು
ನಿನ್ನ ಮೊಗದ ಅಂದವ
ಕಂಡಾಗ
ನಾನಾಗಬೇಕೆನಿಸುವುದು
ನಿನ್ನ ಮಡಿಲ ಮಗು...!
ಸೂರ್ಯಚಂದ್ರರ ಸಾಕ್ಷಿ
ನೀನಿಲ್ಲದೇ ನಾನಿರಲಾರೆ..
ನೀರಲ್ಲಿಲ್ಲದ ಮೀನಿನಂತೆ,
ನದಿಯಿಲ್ಲದ ಕಡಲಿನಂತೆ,
ಹೃದಯವೇ... ನೀನಾಗಿರುವಾಗ
ನಾ ಏಕೆ ಚಿಂತಿಸಲಿ..
ನನ್ನೆದುರು ನೀನಿರುವಾಗ
ನಾ ಏಕೆ ಕನಸ ಕಾಣಲಿ
1 comment:
ನದಿಯಿ೦ದ ಕಡಲೋ? ಕಡಲಿ೦ದ ನದಿಯೋ?
ಸ್ವಲ್ಪ್ ಗೊ೦ದಲದ ಪ್ರಶ್ನೆ ಅಲ್ಲವೇ!
Post a Comment