Saturday, February 14, 2009

ಪ್ರೇಮದ ಕಾಣಿಕೆ

ಯಾವ ಕಾಣಿಕೆ ನೀಡಲಿ...
ಚೆಲುವೆ ನಿನಗೆ,
ಪ್ರೇಮಿಗಳ ದಿನ ಇಂದು,
ಗೊತ್ತು ಕಣೇ, ನಿನ್ನಲಿ
ನಾ ಕಾಣುವ ಸಂತಸ
ನನಗಾಗಿಯೇ ಎಂದು..!
.
.
ನಿನ್ನ ಕುಡಿನೋಟ ಕಂಡಾಗ
ನನ್ನಲಿ ಏನೋ ಒಂಥರಾ..!
.
.
ನಿನ್ನ ತುಂಟ ತುಟಿಗಳ
ಕಂಡಾಗ, ನನ್ನಲಿ
ಏನೋ ಒಂಥರಾ ಮಿಂಚು
ಹರಿದಂತಾಗುತಿದೆ.
.
.
ನಿನ್ನೆ ಕೆನ್ನೆಯ ಮೇಲಿನ
ಮುಂಗುರುಳು ನಾನಾಗಬಾರದೇ?
ಆ ನಿನ್ನ ಕನ್ನೆಗೆ ಮುತ್ತಿಕ್ಕಲು,
ಕಪ್ಪನೆ ಕಾಡಿಗೆ ನಾನಾಗಬಾರದೇ?
ನಿನ್ನ ಕಣ್ಣಂಚಿನ ಹೊಳಪಾಗಲು,
.
.
ಬಾಚಿ ತಬ್ಬುವಾಸೆ ಎನಗೆ
ನಸುನಗುತಾ ನೀನಿರಲು.
ಮುತ್ತನ್ನಿಕ್ಕುವ ಆಸೆಯು ನನಗೆ
ನಿನ್ನ ಕೆಂಪೇರಿದ ಕೆನ್ನೆಯ ಕಾಣಲು
.

3 comments:

ಸೀತಾರಾಮ. ಕೆ. / SITARAM.K said...

ಕೆನ್ನೆ ಕೆ೦ಪೇರುವದು ಮುದ್ದಿಕ್ಕಿದ ಮೇಲೆ ಗುರು ನಿನ್ನ ಅನುಭವ ಕಡಿಮೆ.

Anonymous said...

ಅಗತ್ಯವಿಲ್ಲ ಸೀತಾರಾಮರೆ,
ಬಹುಶ: ನಿಮ್ಮ ಅನುಭವ ಕಡಿಮೆ ಎನಿಸುತ್ತದೆ.

Unknown said...

ಹೌದು ಸ್ನೇಹಿತರೆ. ಪ್ರೆಮ ಕವನಕ್ಕೆ ಅನುಬವಕ್ಕಿಂತ ಕಲ್ಪನೆಯೆ ಮದುರವಾಗಿರುತ್ತದಲ್ಲವೆ?

ಪ್ರಿಯನ ನೆನಪೆ ಸಾಕು ಕೆಂಪೇರಲು ಕೆನ್ನೆ .