
ಹಕ್ಕಿಯ ಚಿಲಿಪಿಲಿ,
ಕೋಗಿಲೆ ಕೂಗು,
ಗಂಟೆಯ ನಾದ ಎಲ್ಲವೂ
ನೀರಸವಾಗಿತ್ತು ಕಣೇ
ನಿನ್ನ
ದನಿಯ ನಾ
ಕೇಳುವ ಮೊದಲು.
ಮುಸುಕಿದ
ಮಂಜಿನ ನಡುವಿನ
ಸೂರ್ಯೋದಯ,
ಜೇನ ಕಡಲಿನಿಂದ
ಮಿಂದು ಬಂದ
ಚಂದ್ರೋದಯ,
ಎಲ್ಲವೂ ಮರೆಯಾಗಿತ್ತು
ನಿನ್ನ ನಾ
ನೋಡುವ ಮೊದಲು
ಖಾಲಿ
ಹಾಳೆಯಂತಿದ್ದ ನನ್ನ
ಮನಸಲಿ ಎಲ್ಲವೂ
ಶೂನ್ಯವಾದಂತ್ತಿತ್ತು ಕಣೇ
ನೀ
ನನ್ನ ಮನದ
ರಾಣಿಯಾಗುವ ಮೊದಲು.
ಎಂಥದೋ
ಭಯಂಕರ ಕತ್ತಲು
ಕಾಡುತ್ತಿತ್ತು ಎದೆಯೊಳಗೆ,
ಕತ್ತಲಿಂದ ತುಂಬಿದ
ನನ್ನ ಈ ಹೃದಯಕೆ
ಬೆಳಕಾಗಿ ನೀ ಬರುವ ಮೊದಲು.
13 comments:
ನೀ ಬ೦ದ ನ೦ತರದ ಬದಲಾವಣೆಗಳೇನು ಎ೦ದು ಸೂಚ್ಯವಾಗಿ ತಿಳಿಸಿದ್ದಿರಾ ಮನದನ್ನೆಗೆ ಅವಳು ಬರುವ ಮು೦ಚೆ ಏನೇನು ಹೇಗಿತ್ತು ಎನ್ನುವದರ ಮೂಲಕ. ಒಳ್ಳೇ ತ೦ತ್ರಗಾರಿಕೆಯ ಕವನ. ಚೆನ್ನಾಗಿದೆ.
ನನ್ನ ಬ್ಲೊಗ್-ನಲ್ಲಿ "ಪರಕಾಯ ಪ್ರವೇಶ" ಎ೦ಬ ಪ್ರೇಮ ಪತ್ರ ಮತ್ತು ಗಾಳಿ ಗ೦ಧ ಎ೦ಬ ಲೇಖನ ನಿಮ್ಮ ಓದಿಗೆ ಕಾಯುತ್ತಿವೆ.
Nice one da...keep it up :-)
Sunil.
Very Nice Lines....
ಪ್ರೇಯಸಿ ಇಲ್ಲದ ಪ್ರೇಮಿಯ ಬಾಳೇ .ಶೂನ್ಯ... ಚಂದದ ಕವಿತೆ.
ಚೆನ್ನಾಗಿದೆ ಕವಿತೆ.
ಸುಂದರ ಅನುಭೂತಿ ನೀಡುವ ಚೆಂದದ ಪ್ರೇಮ ಕವಿತೆ ರಾಘವೇಂದ್ರ.. ಉಪಮೆಗಳು ಸುಂದರವಾದ ಚಿತ್ತಾರಗಳ ಮೂಲಕ ಮನಸ್ಸನ್ನು ಶೃಂಗರಿಸಿರುವಂತೆ ಅನಿಸುತ್ತದೆ.. ನಲ್ಲೆ ಬಂದು ಬಾಳ ಬೆಳಗಿದಳೆಂಬ ಭಾವದ ಅನುಭೂತಿಯೆ ಸುಂದರ ಆ ಭಾವದಲ್ಲರಡಿಕೊಂಡ ಕವಿತೆ ಮನಗೆಲ್ಲುತ್ತದೆ.. ಚೆಂದವಾದ ಕವಿತೆ..:)))
ಮುಸುಕಿದ
ಮಂಜಿನ ನಡುವಿನ
ಸೂರ್ಯೋದಯ,
ಜೇನ ಕಡಲಿನಿಂದ
ಮಿಂದು ಬಂದ
ಚಂದ್ರೋದಯ,.............ತುಂಬಾ ಚೆನ್ನಾಗಿದೆ ರಾಘಣ್ಣ
ಪ್ರೇಯಸಿ ಬಂದ ನಂತರವೇ.. ತಾನೇ.. ದಿನವೂ ನೋಡುವ ಸೂರ್ಯ, ಚಂದ್ರ, ನಕ್ಷತ್ರ, ತಂಗಾಳಿ, ಹೂವಿನ ಪರಿಮಳ.. ಹೀಗೆ ಹಲವು ಹೊಸದಾಗಿ ಕಾಣುತ್ತವೆ. ಕವಿತೆ ಮೆಚ್ಚಿದ್ದಕ್ಕೆ ಧನ್ಯವಾದಗಳು Ashoka BA ಗೆಳೆಯ...
ಧನ್ಯವಾದಗಳು ... Ravi Murnad, and Pramod Shetty
ಒಲುಮೆಯ ನಲ್ಲೆ ಬಂದಾದ ಮೇಲೆ.. ಬಾಳು ಭವ್ಯವಾದಂತೆ ಅನಿಸುತ್ತದೆ. ಅಲ್ಲಿಯವರೆಗೂ ಎಂಥದೋ ಸಣ್ಣ ಕೊರತೆ ಕಾಣುತ್ತದೆ. ಧನ್ಯವಾದಗಳು Prasad V Murthy
nice one
ಆ ಬೆಳಕು ಶಾಶ್ವತವಾಗಿ ಬಾಳಿಗೆ ಬೆಳಕಾಗಿರಲಿ .. ಮನಸಿನ ಭಾವನೆ ಆಯಾಸವಾಗದಂತೆ ನಿಮ್ಮವಳಿಗೆ ಹೇಳಿಕೊಂಡಂತಿದೆ... ಚೆನ್ನಾಗಿದೆ ೧೦/೧೦..
ಹತ್ತಕ್ಕೆ ಹತ್ತು ಅಂಕಗಳು ನೀಡಿದ್ದು ಖುಷಿಯಾಯ್ತು..ಗೆಳೆಯ. ಮೆಚ್ಚುಗೆಗೆ ಧನ್ಯೋಸ್ಮಿ..@Manju Varaga
Post a Comment