Wednesday, May 26, 2010

ನನ್ನೆದೆ ಪ್ರೀತಿ.


ಮುಂಜಾನೆಯಲಿ,
ಈ ಧರೆಯ ಮೇಲೆ, ರವಿ
ಚೆಲ್ಲಿದ ಹೊಂಬಿಸಿಲು ನನ್ನ ಪ್ರೀತಿ.
ಭಯದಿಂದ ಕಂಗೆಟ್ಟ,
ಕತ್ತಲು ತುಂಬಿದ,
ನಿನ್ನ ಹೃದಯಕೆ,
ಬೆಳದಿಂಗಳು ನನ್ನೆದೆ ಪ್ರೀತಿ.

ಬಣ್ಣಬಣ್ಣದ ಹೂಗಳ,
ಕಂಪು ಸೂಸುತಾ ಮೆರೆವ,
ಹೂಬನ ನನ್ನ ಪ್ರೀತಿ.
ಈ ಭೂದೇವಿಗೆ,
ಅಂದ-ಚೆಂದವ ಹೆಚ್ಚಿಸುವ,
ವನಸಿರಿಯಂತೆ ಚೆಂದ
ಕಣೇ ನನ್ನೆದೆ ಪ್ರೀತಿ.

ಅಲ್ಲೆಲ್ಲೊ..
ಹಾರುವ ದುಂಬಿಯನು,
ಕ್ಷಣಮಾತ್ರದಲಿ ಸೆಳೆವ,
ಹೂವಿನ ಮಕರಂದದಂತೆ
ನನ್ನ ಪ್ರೀತಿ.
ಅದೆಷ್ಟೋ,
ವರುಷಗಳಿಂದ
ಹನಿಹನಿಯಾಗಿ ಕೂಡಿಟ್ಟ
ಸಿಹಿಜೇನು ಕಣೇ ನನ್ನೆದೆ ಪ್ರೀತಿ.

ನನ್ನ ಹಾಡಿಗೆ,
ನೀ ಕುಣಿವುದಾದರೆ,
ಆ ನೃತ್ಯಕೆ ಸುಮಧುರ
ಸಂಗೀತ ನನ್ನ ಪ್ರೀತಿ.
ಚೆಲುವೆ,
ನಿನ್ನ ಪ್ರೀತಿಯ ಹಾಡಿಗೆ,
ಪಲ್ಲವಿ ಕಣೇ ನನ್ನೆದೆ ಪ್ರೀತಿ.

ನಿನ್ನದೇ ಬಂಗಾರಿ,
ಇಷ್ಟು ದಿನ ನನ್ನೆದೆಯಲಿ
ಬಚ್ಚಿಟ್ಟ ಈ ಪ್ರೀತಿ.
ಎಲ್ಲಿದ್ದರೂ,
ಬೇಗ ಬಾ ಒಲವೆ,
ನಿನಗಾಗಿಯೇ ನಾ,
ಮೀಸಲಿಟ್ಟಿರುವೆ ನನ್ನೆದೆ ಪ್ರೀತಿ.

17 comments:

Unknown said...

ನಿಜವಾಗಿ ತುಂಬ ಇಷ್ಟ ಆಯ್ತು ರಾಘು .......ಪ್ರಕೃತಿಯ ಪ್ರತಿ ನಡೆಯಲ್ಲು ನಿಮ್ಮ ಸಾರ್ಥಕ ಸಕಾರಾತ್ಮಕ ಪ್ರೀತಿಯನ್ನು ಕಾಣುವ ನಿಮ್ಮ ಕವಿ ಹೃದಯಕ್ಕೆ best of luck

RAGHAVENDRA R said...

thanks... prakash.

Unknown said...

ತುಂಬಾ ಚೆನ್ನಾಗಿದೆ sir

ಸೀತಾರಾಮ. ಕೆ. / SITARAM.K said...

ಪ್ರೀತಿಯ ಹರವನ್ನು ನವಿರಾಗಿ ಎಳೆ-ಎಳೆಯಾಗಿ ಅದ್ಭುತ ಉಪಮೆಯೊ೦ದಿಗೆ ಹೋಲಿಸಿ ಸು೦ದರ ಕವನ ಹೆಣೆದಿದ್ದಿರಾ! ಆದರೆ ಈ " ಭಯದಿಂದ ಕಂಗೆಟ್ಟ,ಕತ್ತಲು ತುಂಬಿದ, ನಿನ್ನ ಹೃದಯಕೆ" ಸಾಲು ಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತು ಅ೦ಥಾ ನನ್ನ ವೈಯುಕ್ತಿಕ ಅಭಿಪ್ರಾಯ.

ಮನು said...

kavana tumba channagide

ಮಂಜಿನ ಹನಿ said...

ನೈಸರ್ಗಿಕ ನೆಲೆಗಟ್ಟಿನಲ್ಲಿ ಪ್ರೀತಿಯ ನೈಜತೆಯನ್ನು ಸಾರುವ ಪ್ರೇಮಕವಿತೆ ಸುಂದರವಾದ ಅನುಭೂತಿಯನ್ನು ಅಸ್ವಾದನೆಯ ಮನಕ್ಕೆ ನೀಡುತ್ತದೆ..:))) ಉಪಮೆಗಳು ನವ್ಯವೆನಿಸುತ್ತವೆ ಮತ್ತು ಕವಿತೆಗೆ ಮೆರುಗು ನೀಡಿ ಕವಿಮನಸ್ಸಿನ ಪ್ರೀತಿಯ ಧ್ಯಾನವನ್ನು ಬಿಂಬಿಸುತ್ತವೆ..
ಅದೆಷ್ಟೋ,
ವರುಷಗಳಿಂದ
ಹನಿಹನಿಯಾಗಿ ಕೂಡಿಟ್ಟ
ಸಿಹಿಜೇನು ಕಣೇ ನನ್ನೆದೆ ಪ್ರೀತಿ.
ಈ ಸಾಲುಗಳಲ್ಲಿನ ಸವಿ ಅನುಭವ ಕವಿತೆಯಲ್ಲಿನ ಸವಿಯಾದ ಭಾವಗಳ ಪ್ರತಿನಿಧಿಯಂತೆ ನಿಲ್ಲುತ್ತದೆ.. ಚೆಂದವಾದ ಕವಿತೆ, ತುಂಬಾ ಇಷ್ಟಪಟ್ಟೆ..:)))

Keerthi said...

NICE KAVANA ANNA

Ravi murnad said...

ಗೊತ್ತಿಲ್ಲದ ಪ್ರೀತಿಗೆ ಒಂದಷ್ಟು ಪ್ರಿಸುಮಾತು ಇಲ್ಲಿವೆ . ಚೆನ್ನಾಗಿದೆ ಭಾವಗಳು.

Paresh Saraf said...

ಪ್ರೀತಿ ತುಂಬಿದ ಭಾವನೆಗಳ ತೇರು.. ಚೆನ್ನಾಗಿದೆ.. ಶುಭವಾಗಲಿ :)

Mohan V Kollegal said...

ಪರಿಶುದ್ಧ ಪ್ರೀತಿಯನ್ನು ಸಮರ್ಥವಾಗಿ ಹೊತ್ತು ತಂದ ಪದಗಳು ಮತ್ತು ಪ್ರತಿಮೆಗಳು... ಚೆನ್ನಾಗಿದೆ....

Pushparaj said...

ಪ್ರೀತಿಯ ಅರುಹು ಚೆನ್ನಾಗಿದೆ. ಜೇಡಿ ಮಣ್ಣಿನೊಳಗಿಂದ ಒಸರುವ ನಿಷ್ಕಲ್ಮಶ ನೀರಾಗಿದೆ ಭಾವ.

Ravi murnad said...

ಮನಸ್ಸನ್ನು ಪ್ರಕೃತ್ತಿಗೆ ತೆರೆದಿಟ್ಟ ಕವಿತೆ ಖುಷಿ ಆಯಿತು.

Prakash Srinivas said...

ಬಣ್ಣಬಣ್ಣದ ಹೂಗಳ,
ಕಂಪು ಸೂಸುತಾ ಮೆರೆವ,
ಹೂಬನ ನನ್ನ ಪ್ರೀತಿ.
ಈ ಭೂದೇವಿಗೆ,
ಅಂದ-ಚೆಂದವ ಹೆಚ್ಚಿಸುವ,
ವನಸಿರಿಯಂತೆ ಚೆಂದ
ಕಣೇ ನನ್ನೆದೆ ಪ್ರೀತಿ.

ಚಂದದ ಸಾಲುಗಳು ಗೆಳೆಯ !

RAGHAVENDRA R said...

ಕವಿತೆ ಇಷ್ಟಪಟ್ಟು ಹರಸಿ ಹಾರೈಸಿದ ನಿಮಗೆ.. ಧನ್ಯವಾದಗಳು.. Ravi Murnad, Paresh Saraf, Mohan V Kollegal, Pushparaj Chauta and Prasad V Murthy

RAGHAVENDRA R said...

ಧನ್ಯವಾದಗಳು ಗೆಳೆಯ Prakash Srinivas

Shakuntala Iyer said...

ನಿಮ್ಮ ಪ್ರೀತಿಯಷ್ಟೇ ಮೆದುವಾದ, ಹಿತವಾದ ಕವನ!

RAGHAVENDRA R said...

ಧನ್ಯವಾದಗಳು.. Shakuntala Iyer ಅಕ್ಕಾ...