
ಅದೆಲ್ಲಿ ಅಡಗಿರುವೆ
ಚೆಲುವೆ, ನನ್ನೆದೆಯ
ಕನಸೆಲ್ಲವನು ಕದ್ದು, ಕಾಣದೇ
ಮಾಯವಾದ ಚಿತ್ತಚೋರಿ.
ನಿನ್ನ ತುಟಿಯಂಚಲಿ
ಮೂಡಿದ್ದ ಹುಸಿನಗೆ,
ಕೋಲ್ಮಿಂಚಿನಂಥ
ಕುಡಿನೋಟದಿಂದ ಸೆಳೆದಿದ್ದೆ.
ನೀನೆನ್ನ ಸ್ವಪ್ನಸುಂದರಿ.
ಚೈತ್ರ ಮುಂಜಾವಿನಲಿ,
ಹನಿಹನಿ ಇಬ್ಬನಿಯಿಂದ
ತೋಯ್ದ ಹಚ್ಚಹಸಿರು ನೆಲದಲಿ,
ನೀನೋಡುವಾಗ ಕೇಳಿದ್ದ
ನಿನ್ನ ಕಾಲ್ಗೆಜ್ಜೆಯ ಸದ್ದು
ನನ್ನ ಕಾಡುತಿದೆ.. ಕಣೇ....
ನಮ್ಮೂರ
ಮಾವಿನ ತೋಪಿನ,
ಹಸಿಮಣ್ಣಿನ ಕಂಪು.
ಕ್ಷಣಮಾತ್ರದಲಿ ಸೆಳೆದಿತ್ತು,
ರಂಬೆ-ಮೇನಕೆಯರನು
ಮೀರುವ ನಿನ್ನ ರೂಪು,
ಹಗಲು-ಇರುಳೆನ್ನದೇ
ಪದೇಪದೇ ಕಾಡುವುದು
ನಿನ್ನ ನೆನಪು
ತಿಂಗಳ
ಬೆಳದಿಂಗಳಿನಲಿ,
ತಣ್ಣಗೆ ತೀಡುವ ತಂಗಾಳಿಯಲಿ,
ನನ್ನನು ನಾ
ಮರೆಯುವೆ, ನೀನಿದ್ದಾಗ
ನನ್ನ ತೋಳಬಂಧನದಲಿ,
ಅದು ಹೇಗೋ ಗೊತ್ತಿಲ್ಲ ಕಣೇ,
ನಿನ್ನ ಪ್ರೀತಿ ಸದಾ
ನನ್ನದಾಗಿ ಇರಬೇಕು ಎಂಬ
ಸ್ವಾರ್ಥ ಮೂಡುತಿದೆ ನನ್ನಲಿ.
5 comments:
Hello Sir,
Good Poems. Nice feelings!
It is high time that marriage is proposed. Good luck.
Bedre
thank u sir.
very cute
ಡಿಯರ್
ಸರ್
ನಿಮ್ಮ ಕವನಗಳು ತುಂಬಾ ಅದ್ಬುತವಾಗಿದ್ದು ತಮ್ಮ ಮನವನ್ನು ಕಲಕುತ್ತಿವೆ ಎಂದೆಂದಿಗೂ ನಮ್ಮ ಮನದಲ್ಲಿ ಅಚ್ಚ ಅಸಿರಾಗಿ ಉಳಿದಿವೆ
ಆ ಅಚ್ಚ ಅಸಿರೆ ನೀವು ಬೇಗ ಬನ್ನಿ ತಾಲ್ಲೂಕು ಪಂಚಾಯಿತಿಗೆ ಅವ್ಯವಸ್ಥೆಯಾಗಿದೆ ನಿವು ಬಂದು ವ್ಯವಸ್ಥೆಮಾಡಿ ದಯಮಾಡಿ ಬನ್ನಿ
ಪ್ರಹ್ಲಾದ್,ಅನುರಾಧ,ಮೀನಾಕ್ಷ,ರತ್ನಮ್ಮ,ಬಾನು
ಇದು ಕವನ ನಾ....? ಪಾಠನ
Post a Comment