Friday, October 30, 2009

ತಂಗಾಳಿ ಹಾಗೂ ಬೆಳದಿಂಗಳು



ಅದೇಕೋ ಗೊತ್ತಿಲ್ಲ
ನನಗೆ ಆಗಾಗ ತುಂಬಾ
ಕಾಡುವುದು ಈ
"ಇರುಳ ತಂಗಾಳಿ ಹಾಗೂ
ಬೆಳದಿಂಗಳು"

ಸೊಯ್ಯಸೊಯ್ಯನೆ ಬೀಸುವ
ತಂಗಾಳಿಯಿಂದಾಗಿ,
ನನ್ನವಳ ಮುಂಗುರುಳು
ನನ್ನ ಮೋರೆಗೆ
ತಾಗಿದಂತಾಗುತದೆ.

ಹಾಲ್ಬೆಳಕನು,
ಚೆಲ್ಲಿದ ಚಂದ್ರಮನ ಕಂಡಾಗ,
ಅವಳ ಎದೆಯಲ್ಲಿಯೇ
ಅರಳುವ ಕನಸುಗಳು
ಕಾಣಿಸುತ್ತವೆ.

ಕಡಲಂಚಲಿ ನಡೆದಾಡುವಾಗ
ಆ ಅಲೆಗಳ ನಾದವು,
ನನ್ನವಳ ಕಾಲ್ಗೆಜ್ಜೆಯ
ಸದ್ದನು ನೆನಪಿಸುತ್ತದೆ.

ಅದಕ್ಕೆ ಇರಬೇಕು..!
ನನಗೆ ತುಂಬಾ
ಕಾಡುವುದು ಈ
"ತಂಗಾಳಿ ಹಾಗೂ
ಬೆಳದಿಂಗಳು."

3 comments:

ಸೀತಾರಾಮ. ಕೆ. / SITARAM.K said...

ಸು೦ದರವಾದ ಕವನ ರಾಘಣ್ಣಾ

Anonymous said...

ನಿಮ್ಮ ಬರಹ ಬಹಳ ಸುಧಾರಿಸಬೇಕಾಗಿದೆ.
ಹೊಗಳಿ ಹೊನ್ನ ಶೂಲಕ್ಕೇರಿಸುವರನ್ನು ನೆಚ್ಚಬೇಡಿ.

|| ಪ್ರಶಾಂತ್ ಖಟಾವಕರ್ || *Prashanth P Khatavakar* said...

ಪ್ರೇಮದ ಮಧುರ ಕ್ಷಣಗಳು.. ಒಂದು ಸುಂದರ ಪ್ರೇಮ ಸನ್ನಿವೇಶವನ್ನು ಕವಿತೆ ಮಾಡಿದ್ದು ಸೊಗಸಾಗಿದೆ.. :)