Monday, March 29, 2010

ನನ್ನವಳ ಅಂದ


ನೀಲಿ
ಆಕಾಶದಲ್ಲಿ ಮಿನುಗುವ
ತಾರೆಗಳ ನಡುವೆ, ನಗುವ
ಚಂದಿರನಿಗಿಂತ ಚಂದ
ನನ್ನವಳ ಅಂದ.


ತೋಯ್ದ
ತಾವರೆಯ ಎಲೆಯಿಂದ
ಬೀಸಿದ ಚಾಮರದಿಂದ
ಬರುವ ತಂಗಾಳಿಯಂತೆ
ತಂಪು, ನನ್ನವಳ ಅಂದ


ಮುಂಜಾನೆಯಲಿ
ಉಷೆ ಮೂಡುವಾಗ,
ಚಿಲಿಪಿಲಿಗುಡುವ ಹಕ್ಕಿಗಳ
ಚಿಲಿಪಿಲಿಯಂತೆ ಚೆಂದ
ನನ್ನವಳ ಅಂದ


ಅದೆಷ್ಟೋ
ಕಾಲದಿಂದ ನನ್ನೆದೆಯಲಿ
ಕಾಡುತ್ತಿದ್ದ ನೋವುಗಳೆಲ್ಲವೂ
ಮಂಜಿನಂತೆ ಕರಗಿಹೋಯ್ತು
ಕಂಡಾಗ ನನ್ನವಳ ಅಂದ


ನಾ ಕಾಣೋ
ಲೋಕವೆಲ್ಲವೂ ಮರೆತು
ಹೋಯ್ತು, ಎಂದೂ ಕಾಣದ
ಸಂತಸ ಮೂಡಿತು ನನ್ನೆದೆಯಲಿ
ಕಂಡಾಗ ನನ್ನವಳ ಅಂದ


ಎಲ್ಲವನೂ ಮರೆತು
ಮುಗ್ಧ ಮಗುವಿನಂತಾದೆ,
ಆ ಸೌಂದರ್ಯದ ಆರಾಧಕನಾದೆ,
ಸದಾ ಅಪ್ಪಿ ಮುದ್ದಾಡಬೇಕೆನಿಸುತಿದೆ
ನನ್ನವಳ ಅಂದ.

5 comments:

Ranjita said...

tumba chenenagide . heege mudvarisi :)

ಸೀತಾರಾಮ. ಕೆ. / SITARAM.K said...

ಚೆ೦ದದ ಕವನ.
ನಿಮ್ಮ ನೀರೀಕ್ಷೆಯ ಅ೦ದದ ನಿಮ್ಮವಳು ಸಿಗಲಿ ಎ೦ದು ಹಾರೈಸುವೆ.

RAGHAVENDRA R said...

Thank U seetharam sir...

and

Thnx for ranjitha madem. Nimma prothsaha heege irali.

Anonymous said...

hai
anda nodi priti uttola ree
adu nijawada priti alla ree
nijwaglu manasu solodu olle gunakke
adu savira kala savillda priti
nimge olle guna iro hudugi sigli nim kanasige mundina darige avalu belakagirali

RAGHAVENDRA R said...

ನಿಜ ... ಸ್ನೇಹಾ...ಅವರೇ...

ಸಾವಿರ ಜನುಮಗಳವರೆಗೂ ಸಾವು ಇರದ ಅನುರಾಗ.. ತುಂಬಾ ಮನೋಹರ ಹಾಗೂ ವರ್ಣನಾತೀತ. ಬರೀ ಅಂದ ನೋಡಿ ಪ್ರೀತಿ ಹುಟ್ಟಬಾರದು ನಿಜ. ಆದರೆ ಒಂದು ಸಾರಿ ಪ್ರೀತಿಸಿದವರ ನೆನೆದರೆ ಅವರು ಯಾವ ರೀತಿ ಕಂಡರೂ.. ಅವರಷ್ಟೂ ಅಂದಗಾತಿ ಇಲ್ಲವೆಂದು ಹೇಳುವುದು. ಹೆತ್ತವಳಿಗೆ ಹೆಗ್ಗಣ ಮುದ್ದು, ಕಟ್ಕೋಂಡವಳಿಗೆ ಕೋಣ ಮುದ್ದು ಅಂತಾರಲ್ಲ ಹಾಗೇ. ಪ್ರೀತಿ ಕುರಿತು ... ಎಷ್ಟು ಹೇಳಿದರೂ ಸಾಲದು. ನಿಮ್ಮ ಹಾರೈಕೆಗೆ ಧನ್ಯವಾದಗಳು..