
ಯಾವ
ರೀತಿ ಮರೆತೆ,
ಚೆಲುವೆ ನೀನು ನನ್ನ...?
ನಾನು
ನನ್ನ ಪ್ರಾಣಕ್ಕಿಂತ
ಹೆಚ್ಚು ಪ್ರೀತಿಸುತ್ತಿದ್ದೆ ನಿನ್ನ..!
ನೀ ಬಿಟ್ಟು
ಹೋದ ಕ್ಷಣಗಳ
ಕಹಿನೆನಪು, ಬೇಡವೆಂದರೂ
ಹೃದಯವನು ಕೊರೆಯುತ್ತಿತ್ತು.,
ಕಡಲಂಚಿನ
ಬಂಡೆಗಳಿಗೆ ಬಂದು
ಅಪ್ಪಳಿಸುವ ಕಡಲ ಅಲೆಯಂತೆ..!
ಅದೆಷ್ಟೂ
ತಡೆದರೂ ನಾ,
ಉಕ್ಕಿ ಬರುತ್ತಿತ್ತು. ನನ್ನ
ಕಣ್ಣಂಚಿನ ಅಶ್ರುಧಾರೆ,
ತನ್ನನು ತಾನೇ
ಸುಡುತ್ತಾ ಅಳುವ ಮೇಣದಂತೆ.
ನನ್ನ ಹೃದಯ
ಬೆಂದರೂ ಸರಿ,
ಚೂರಾದರೂ ಸರಿ...
ಬಿಟ್ಟು ಬಿಡು ಚೆಲುವೆ,
ನನ್ನ ಎದೆಯ ಗೊಡವೆ.
ನಿನಗೆ
ಯಾವ ಕ್ಷಣಕೂ
ಕಹಿನೆನಪು ಕಾಡದಿರಲಿ,
ನಿನ್ನ ಹೃದಯ ನೋವಾಗದಿರಲಿ,
ಎಂಬುದೊಂದೇ ಈ
ನನ್ನ ಹೃದಯದ ಕೋರಿಕೆ
20 comments:
ಕೈಬಿಟ್ಟ ಪ್ರಿಯತಮೆಯ ಕೊರಗಿನಲ್ಲೂ ಅವಳಿಗೆ ಶುಭ ಹಾರೈಸುವ ಪ್ರೇಮಿಯ ಚಿತ್ರಣ ಸೊಗಸಾಗಿ ಮೂಡಿದೆ. ಉರಿದು ಕರಗುವ ಮೇಣದಹನಿಗೆ ಕಣ್ಣಿರನ್ನು ಹೋಲಿಸಿದ್ದು ಇಷ್ಟವಾಯಿತು.
nice one geleya...
thank u sir
and
thank u geleya..
goodd nice one
nice one..
ಧನ್ಯವಾದಗಳು... Lokesh Ram, and Suresh R G Gaji
ನಿಮ್ಮ ಕೋರಿಕೆ ನಿಮ್ಮ ಚೆಲುವೆಗೆ ಬೇಗ ಮುಟ್ಟಲಿ.. ಚೆಂದವಾದ ಸಾಲುಗಳು ಇಷ್ಟ ಆಯ್ತು .. ಶುಭವಾಗಲಿ ಮುಂದುವರೆಸಿ
ಚೆನ್ನಾಗಿದೆ ಪದಬಳಕೆ.
ಧ್ನಯವಾದಗಳು .... Manju Varaga and Bhimasen Purohit
wow :)
ನಿಸ್ವಾರ್ಥ ಪ್ರೇಮಿಯೊಬ್ಬನ ಮನದಾಳದ ನೋವು, ಹತಾಶೆಗಳಿಗೆ ಪದಗಳ ಮೂಲಕ ಭಾವಗಳನ್ನು ಹೊರಗೆಳೆದು ಮನಸ್ಸನಲ್ಲಿನ ನೋವನ್ನು ನಂದಿಸುವ ಕಾರ್ಯ ಮನಮುಟ್ಟುವಂತೆ ಮೂಡಿ ಬಂದಿದೆ ರಾಘವೇಂದ್ರರೆ..
ಅದೆಷ್ಟೂ
ತಡೆದರೂ ನಾ,
ಉಕ್ಕಿ ಬರುತ್ತಿತ್ತು. ನನ್ನ
ಕಣ್ಣಂಚಿನ ಅಶ್ರುಧಾರೆ,
ತನ್ನನು ತಾನೇ
ಸುಡುತ್ತಾ ಅಳುವ ಮೇಣದಂತೆ.
ಈ ಸಾಲುಗಳಲ್ಲಿನ ಭಾವ ತೀವ್ರತೆ ಪ್ರೀತಿಯ ಆಳವನ್ನು ಹೊರಗೆಳೆಯುವಲ್ಲಿ ಯಶ ಕಂಡಿದೆ.. ಮನಸ್ಸಿನಲ್ಲುಳಿಯುವ ಕವಿತೆ.. ಮೆಚ್ಚುಗೆಯಾಯಿತು..
ತುಂಬಾ ಚೆನ್ನಾಗಿದೆ... ಪದಗಳನ್ನು ಕವಿತೆಯೆಂಬ ದಾರಕ್ಕೆ ಪೋಣಿಸಿದ ರೀತಿ ತುಂಬಾ ಇಷ್ಟವಾಯಿತು. ಲಯಬದ್ಧವಾಗಿ ಇಷ್ಟು ಸುಂದರವಾಗಿ ಕವಿತೆ ರಚಿಸುವ ಶಕ್ತಿ ನಿಮ್ಮಲ್ಲಿರುವಾಗ ಸ್ವಲ್ಪ ವಸ್ತು ವೈವಿಧ್ಯತೆಯೆಡೆಗೆ ಗಮನ ಹರಿಸಿ.... ವಂದನೆಗಳು...
ನಿಮ್ಮ ಕವನ ಹೀಗೆ ಭಾವ ತುಂಬಿ ಮೂಡಿ ಬರಲಿ ಎಂಬ ಕೋರಿಕೆ ನನ್ನದೂ ಕೂಡ.
ಅದ್ಭುತವಾದ ಭಾವಪೂರ್ಣ ಕವಿತೆ ಗೆಳೆಯ.., ಪ್ರೀತಿಯ ಅರ್ಥ ಹುಡುಕುವ ಸಮಯದಲ್ಲಿ., ನಾವು ಪ್ರೀತಿಸಿದವರು ಸಂತೋಷದಿಂದಿರಲಿ ಎಂಬ ಭಾವವೇ ಪ್ರೀತಿಯೆ.!! ಎಂದೆನಿಸದೆ ಇರದು.., ಅದನ್ನು ನಿಮ್ಮ ಕಾವ್ಯದಲ್ಲೂ ಕಂಡೆ.. ನಿಮಗೆ., ನಿಮ್ಮ ಪ್ರೀತಿಗೆ., ನಿಮ್ಮ ಪ್ರೇಯಸಿಗೆ ಶುಭವಾಗಲಿ.. :))
ಮನದಾಳದ ಮಾತುಗಳ ಭಾವಪೂರ್ಣ ಕವಿತೆ.. ಇಷ್ಟವಾಯಿತು.. :)
"ಕಳೆದುಕೊಂಡ ಪ್ರೇಯಸಿಗೆ ನೋವಾಗದಿರಲಿ.." ಎಂಬುದೊಂದೇ ಹಾರೈಕೆಯೊಂದಿಗೆ ಈ ಕವನ ಮೂಡಿಬಂತು. ಕವಿತೆಯಲ್ಲಿ ನಿಸ್ವಾರ್ಥ ಪ್ರೀತಿಗೆ ಎಂದು ಸೋಲಾಗುವುದಿಲ್ಲವೆಂದು ಹೇಳ ಹೊರಟಿದ್ದೆ. ಕವಿತೆಯ ಬಾವವನ್ನು ಸೂಕ್ಷ್ಮವಾಗಿ ಗಮನಿಸಿದ ನಿಮಗೆ ಧನ್ಯವಾದಗಳು. Prasad V Murthy, Mohan V Kollegal
ಧನ್ಯವಾದಗಳು.. Pushparaj Chauta, Pramod Pammi and Prashanth P Khatavakar
ಕೋರಿಕೆ ಯಲ್ಲಿ ಮನಸಿನ ಹತಾಶೆಯನ್ನು ಮನಮುಟ್ಟುವಂತೆ ವ್ಯಕ್ತಪಡಿಸಿದ್ದೀರಿ
ಧನ್ಯವಾದಗಳು... Bindu Hegde
ನಿಮ್ಮ ಹೃದಯ ಕೋರಿಕೆಯಲ್ಲೂ ವಿರಹದ ವೇದನೆಯ ನೋವಿದೆ.. ಇಷ್ಟವಾಯ್ತು ಗೆಳೆಯ
Post a Comment