
ಇನಿಯಾ
ನಿನಗಾಗಿ ಕಂಡಿದ್ದೆ,
ನಾ ನನ್ನ ಕಣ್ಣಂಚಿನಲಿ
ನೂರೊಂದು ಸಿಹಿಕನಸುಗಳು.
ಅವುಗಳು
ಪ್ರತಿಕ್ಷಣಕೂ ನನ್ನ
ಕೆನ್ನೆಕೆಂಪನು ಇನ್ನೂ
ಹೆಚ್ಚಿಸಲು ಕಾಡುವ ನೆನಪುಗಳು.
ಯಾವ
ಜನುಮದ ಪುಣ್ಯವೋ,
ಏನೋ, ನಾ ಕಾಣೆ
ನಿನ್ನ ಪ್ರೀತಿಯ ನಾ ಪಡೆಯಲು.
ಭಾವುಕಳಾದೆ
ನಾನು, ಕಣ್ಣಂಚಿನಲಿ
ಹನಿಗಳು ತುಂಬಿಕೊಂಡೆ,
ಕಂಡಾಗ ನಿನ್ನ ಪ್ರೀತಿಯ ಹೊನಲು.
ಜಗವನ್ನೆಲ್ಲಾ
ಮರೆತು, ನನ್ನೆಲ್ಲಾ
ನೋವುಗಳ ಮರೆತು
ಪ್ರತಿಕ್ಷಣವನೂ ಮೀಸಲಿಡುವೆ ನಿನಗಾಗಿ
ತಿಳಿಮುಗಿಲಿನಂತೆ,
ಹರಿವ ನದಿಯಂತೆ,
ಮಕರಂದಕ್ಕಿಂತಲೂ ಚೆಂದ
ನೀ ತೋರುವ ಪ್ರೀತಿ... ನನಗಾಗಿ.
5 comments:
ಇನಿಯನ ಪ್ರೀತಿ ಬಿಚ್ಚಿಡಲಾಗದ ಭಾವ ಅದು .. ಹೋಲಿಕೆಗಳು ಚೆನ್ನಾಗಿವೆ ..
Nice one Raghu ;-)
eee naviru bhavagalu nimmalli haage ulili annodu devaralli nanna prarthane ;-)
Sunil.
Geleya,
Wanna suggest u..dayavittu different aagi enadru bareyoke try maadu...ee priti prema ella bahala hale modellu......boraagolva?
thank u seeetharam.. sir.
thank u ranjitha..madem
Thank u ANIKETHANA ...sunil
thank u ...UNKWNON..
ಹಲೋ ಸರ್
ನನ್ನ ಇನಿಯನ ಪ್ರೀತಿ ಕವನ ನನ್ನ ಪ್ರೀತಿ ಗಿಂತ ತುಂಬಾ ಚೆನ್ನಾಗಿದೆ ಈ ಕವನ ಪ್ರೀತಿಸಿದವರ ಪಾಲಿಗೆ ಒಂದು
ಇಂತಿ
ಪ್ರೇಮ ಪ್ರಹ್ಲಾದ
ನನ್ನಿವಾಳ
Post a Comment