Friday, March 12, 2010

ನಗುವಿನಲೆಯಲಿ...

ಚೆಲುವೆ
ನಿನ್ನ ಮೋಹಕ ನಗುವು
ಅಲೆಅಲೆಯಾಗಿ ಕಾಡಿತ್ತು
ನಾ
ಹಿಡಿದು ಹೊರಟಾಗ
ತಿಂಗಳ ಬೆಳಕಿನ ಜಾಡು.

ನೀ ಅದು
ಹೇಗೆ ಬಂಧಿಸಿದೆನ್ನ
ನಿನ್ನ ನಗುವಿನಲೆಯಲಿ.
ಹಸಿವೆಯೂ ಇಲ್ಲ,
ನಿದಿರೆಯೂ ಬರುತ್ತಿಲ್ಲ,
ಕಾಡುತಿದೆ ನಿನ್ನ
ಮೊಗದ ಬಿಂಬ ಕಣ್ಣಲಿ.

ಸಾವಿರ
ಸದ್ದಿನ ನಡುವೆಯೂ
ಕೇಳುತಿದೆ ಗೆಳತಿ
ನಿನ್ನಂತರಂಗದ ಪಿಸುಮಾತು.
ಹಾಲ್ಬೆಳಕಲಿ
ಮಿಂದ ನಿನ್ನ ಕೆನ್ನೆಗೆ
ಕೊಡಬೇಕೆನಿಸುತಿದೆ ಸಿಹಿಮುತ್ತು.

ನಿನಗಾಗಿ ನಾ
ನೂರಾರು ವರುಷಗಳು
ಕಾಯುತ, ಮರೆಯುವೆ
ನನ್ನನ್ನೇ ನಾ
ನಿನ್ನ ನಗುವಿನಲೆಯಲಿ...!
.

5 comments:

ಸೀತಾರಾಮ. ಕೆ. / SITARAM.K said...

ಕವನ ಚೆನ್ನಾಗಿ ಮೂಡಿದೆ.
ಎರಡನೆ ಪ್ಯಾರದ ಮೊದಲನೇ ಸಾಲಲ್ಲಿನ ಅದು-ಅ೦ದು ಅಗಬೇಕಿತ್ತೆನೋ?
ನೂರಾರು ವರುಷ ಕಾಯುವದು ಆಗದಿರಲಿ ಎ೦ದು ಹಾರೈಸುವೆ.

RAGHAVENDRA R said...

"ನೀ ಅದು ಹೇಗೆ ಬಂಧಿಸಿದೆ" ಎಂದು ನಾನು ಅವಳನ್ನ ಪ್ರಶ್ನಿಸುತ್ತಿದ್ದೇನೆ...ಸಾರ್.
ಪ್ರತಿಯೊಂದು ಹೃದಯವು ಪ್ರೀತಿಗಾಗಿ ಕಾಯಬೇಕಲ್ಲವೇ ಸಾರ್...

Ranjita said...

chandada kavana ..last pyara tumba chennagide :)

RAGHAVENDRA R said...

thank U Ranjitha.... Mad'm


Send a picture Scrap - 123orkut said...

super...........................................b