Monday, March 29, 2010

ನಿನ್ನ ಹೆಸರು..


ನಗುವ
ತಾವರೆಯನು ಹಿಡಿದು
ಚಂದಿರನೇ ನಾಚುವಂತೆ
ನಸುನಗುತಾ, ನಲಿಯುತಾ;
ನಿನ್ನ ಉಗುರಿನಿಂದ
ಅದೇ ತಾವರೆಯ
ಎಲೆ ಮೇಲೆ ಬರೆದಿದ್ದೆ,
ನೀ ನಿನ್ನ ಹೆಸರು


ಆಗ ಗೊತ್ತಾಯ್ತು
ಚೆಲುವೆ ನನಗೆ,
ತಾರೆಗಳ ನಡುವೆ ನಲಿವ
ಚಂದಿರನ ಕಾಂತಿಗಿಂತಲೂ
ಚೆಂದ ನಿನ್ನ ಹೆಸರು.


ಆ ತಾರೆಗಳ
ಜೋಡಿಸಿ, ಅದೇ
ನೀಲಾಕಾಶದಲ್ಲಿ ಮಿಂಚಾಗಿ
ನೋಡಬೇಕೆನಿಸಿತ್ತು ಕಣೇ
ನಿನ್ನ ಹೆಸರು.


ನಸುಕಿನಲಿ
ಮೂಡಿದ ಕಿರಣಗಳ
ಕಂಡು ಅರಳುವ ಸುಮಗಳ
ಪರಿಮಳದಲ್ಲಿ ಹಿಡಿದಿಡಬೇಕು
ಎನಿಸುತಿದೆ ನಿನ್ನ ಹೆಸರು.


ನಿನ್ನ ನಗುಮೊಗದ
ನೆನಪನ್ನೆ ಮತ್ತೆಮತ್ತೆ,
ತೆರೆತೆರೆಯಾಗಿ ಮೂಡಿಸುತ್ತಿದ್ದ,
ಸಮುದ್ರದ ಅಲೆಗಳಲ್ಲಿ
ಬಚ್ಚಿಡಬೇಕೆನಿಸುತಿದೆ ನಿನ್ನ ಹೆಸರು


ನನ್ನ ಹೃದಯದ
ರಕ್ತದ ಕಣಕಣದಲ್ಲೂ
ಮಿಂಚುತಿದೆ ನಿನ್ನ ಹೆಸರು
ಕಂಡಾಗ
ನವಿಲುಗರಿ ಹಿಡಿದಿದ್ದ ನಿನ್ನ
ಪುಸ್ತಕದ ಪುಟಗಳಲ್ಲೆಲ್ಲಾ
"ನನ್ನ ಹೆಸರು".

14 comments:

Unknown said...

bhala sundravagid premara

Unknown said...
This comment has been removed by the author.
raj said...

Hi Raghavendra....
nimmedeya preethi uttamavagi haridide.... nimma kalpaneya gari bere kadegoo hariyali... preethiya jote ellavoo irali

ಸೀತಾರಾಮ. ಕೆ. / SITARAM.K said...

nice

RAGHAVENDRA R said...

thanks mahesh.
and seetharam sir...

Thanx rajeshwari madem, nanna kalpaneya gariyalli... preethiya jothe ellavoo iruvanthe ... prayathna naditha ide..

preethiya horathu bere kalpanegala bannanege nanna mattondu blogs kooda visit madi.
http://durgasahityasammelana.blogspot.com
http://banadahoogalu.blogspot.com
http://gadagsahitya.blogspot.com

Unknown said...

"ನಿನ್ನ ಹೆಸರು.."

nimmedeya preethi uttamavagi haridide sir


ಶುಭವಾಗಲಿ

Anonymous said...

What is her name dear brother... Iam awaiting to hear that wonder full name... Reply me soon... Nice words u have used in this poem dear... Keep it up of using good words....

ನೆನಪಿನ ಅಲೆಗಳ ಜೊತೆ ನನ್ನ ಪಯಣ said...

chennagide..

Anonymous said...

ಹಲೋ ಸರ್

ನಿನ್ನ ಹೆಸರು
ಈ ಕವನ ತುಂಬಾ ಚೆನ್ನಾಗಿ ಮೂಡಿದ್ದು ಈ ಕವನದಲ್ಲಿರುವ ರಸವತ್ತಾದ ಪದಗಳನ್ನು ವರ್ಣಿಸಲು ನಿಮಗೆಸ್ಠು ಕಷ್ಟವೆಂದು ನನಗೆ ಗೋತ್ತಿಲ್ಲ ಆದರೆ ನಿಮ್ಮ ಕವನಗಳಿಗೆ ನನ್ನ ಹೃದಯ ಪೂರ್ವಕ ವಂದನೆಗಳು
ನಿಮ್ಮ ಪೂನ್ ಸಂಖ್ಯೆ ನನಗೆ ಗೋತ್ತಿಲ್ಲಿ
ಇಂತಿ
ಪ್ರೇಮ ಪ್ರಹ್ಲಾದ
ನನ್ನಿವಾಳ
9481720432

ಮತ್ತು

ಮಮತಾ
ಮಲ್ಲೂರಹಳ್ಳಿ

Prasad said...

ಸುಂದರವಾದ ಸಾಲುಗಳು ರಾಘವೇಂದ್ರ ರವರೆ.. ಪ್ರಿಯತಮೆಯ ಹೆಸರಿಡಿದು ಜಗವನ್ನೇ ಕೈಲಿಡಿದಂತೆ ಭಾವವನ್ನು ಮನಸ್ಸಿನಲಿ ತಳೆದು ಕನಸ್ಸಿನ ನೌಕೆಯನ್ನು ಹತ್ತಿ ಹೋಗುವ ನಾವಿಕನ ಪರಿ ನಿಮ್ಮ ಕವಿತೆಯಲ್ಲಿ ಸುಂದರ ಪದಗಳಲ್ಲಿ ವ್ಯಕ್ತವಾಗಿದೆ..:))) ಪ್ರತಿಯೊಂದು ಕಣ ಕಣ ದಲ್ಲಿಯೂ ಆಕೆಯ ಹೆಸರೇ ಪ್ರೇಮಿಗೆ ಕಾಣುವುದೆಂಬ ಭಾವ, ನವಿರಾದ ಸಾವಿರಾರು ಭಾವ ತಂತಿಗನ್ನು ಮೀಟುತ್ತಾ ಓದುಗನನ್ನು ಪ್ರೀತಿಯ ಅಲೆಯಲ್ಲಿ ಕೊಚ್ಚಿಹೋಗುವಂತೆ ಮಾಡುತ್ತದೆ..:))) ಶುಭವಾಗಲಿ ನಿಮಗೆ, ಇನ್ನಷ್ಟು ಬರೆಯಲಿ..:)))

Nataraju said...

ರಾಘವೇಂದ್ರರವರೆ, ಪ್ರೀತಿಗೆ ಹಾಗು ಅದರ ಒಡೆಯನಿಗೆ ಒಂದು ಮುಗ್ಧತೆ ಇರುತ್ತೆ. ನಿಮ್ಮ ಕಣ್ಣುಗಳಲ್ಲಿ ಹಾಗು ನಿಮ್ಮ ಕವಿತೆಗಳಲ್ಲಿ ಅದು ಎದ್ದು ಕಾಣುತ್ತೆ.. ಪುಸ್ತಕದಲ್ಲಿ ಹೆಸರು ಬರೆಸಿಕೊಂಡ ನೀವು ಪುಣ್ಯವಂತರು..

Banavasi Somashekar said...

ಸುಂದರ,ರಮ್ಯ,ಮನೋಹರ ಕವಿತೆ.ನಿಮಗೆ ಗಟ್ಟಿ ಕವಿತೆ ಸೃಷ್ಟಿಯ ತಾಕತ್ತು ಉಂಟು.ಇಷ್ಟವಾದ ಕವಿತೆ ಇದು.

Pushparaj said...

ಎಂಥಹ ಅದ್ಬುತ ಭಾವ ಇದು ರಾಘವೇಂದ್ರ,
ಹಿತವಿದೆ ಇಲ್ಲಿ "ನಸುಕಿನಲಿ ಮೂಡಿದ ಕಿರಣ", ಅರಳುವ ಸುಮ", "ಪರಿಮಳ", ಆ ಸುವಾಸನೆಯೊಳಗೆ ಅವಳ ಹೆಸರ ಹಿಡಿದಿಡುವ ಅನಿಸಿಕೆ. ಅಬ್ಬಬ್ಬ ಸುಮಧುರ ಕಲ್ಪನಾ ಶಕ್ತಿ ಅಡಗಿದೆ.

Banavasi Somashekhar.ಬನವಾಸಿ ಮಾತು said...

ಸುಂದರ,ರಮ್ಯ,ಮನೋಹರ ಕವಿತೆ.ನಿಮಗೆ ಗಟ್ಟಿ ಕವಿತೆ ಸೃಷ್ಟಿಯ ತಾಕತ್ತು ಉಂಟು.ಇಷ್ಟವಾದ ಕವಿತೆ ಇದು.